ಕಮರ್ ಉಲ್ ಇಸ್ಲಾಂ (ಜನನ ೨೭ ಜನವರಿ ೧೯೪೮) ಇವರನ್ನು ಸಾಮಾನ್ಯವಾಗಿ ಕಮರ್ ಸಾಬ್ ಎಂದು ಕರೆಯುತ್ತಿದ್ದರು. ಇವರು ಒಬ್ಬ ಭಾರತೀಯ ರಾಜಕಾರಣಿ. ಇವರು ಕರ್ನಾಟಕ ವಿಧಾನಸಭೆಯಲ್ಲಿ ಆರು ವರ್ಷ ಸದಸ್ಯರಾಗಿದ್ದರು. ಕಲಬುರಗಿಯಿಂದ ಲೋಕಸಭೆಯಲ್ಲಿ ಒಂದು ವರ್ಷದ ಅವಧಿಗೆ ಸಂಸದರಾಗಿದ್ದರು. ಆಲ್ಇಂಡಿಯಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಅದಲ್ಲದೆ ಕೇರಳ ರಾಜ್ಯದ ಉಸ್ತುವಾರಿ ಸಚಿವರಾಗಿದ್ದರು. ಇವರು ವಸತಿ ಮತ್ತು ಕಾರ್ಮಿಕ ಉಸ್ತುವಾರಿ ಸಚಿವರಾಗಿ, ಪೌರಾಡಳಿತ ಸಾರ್ವಜನಿಕ ಉದ್ದಿಮೆಗಳ ಉಸ್ತುವಾರಿ ಸಚಿವರಾಗಿ, ಮತ್ತು ವಕ್ಫ್ ನ ಉಸ್ತುವಾರಿ ಸಚಿವರಾಗಿದ್ದರು. ಮತ್ತು ಕರ್ನಾಟಕ ರಾಜ್ಯದ ಕಲಬುರಗಿ-ಉತ್ತರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ಕಮರ್ ಉಲ್ ಇಸ್ಲಾಂ ಅವರು ನೂರುಲ್ ಇಸ್ಲಾಂರವರ ಮಗ. ಅವರು ಕಲಬುರಗಿಯಲ್ಲಿ ಜನಿಸಿದರು. ಇವರು ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾಂತ್ರಿಕ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಅವರು ಮೊದಲು ಪಿಡಿಎ ಚುನಾವಣೆಯಲ್ಲಿ ನಿಂತು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದರು. ಪಿಡಿಎ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಅಲಂಕರಿಸಿದ ಮೊದಲ ಮತ್ತು ಕೊನೆಯ ಮುಸ್ಲಿಂ ವಿದ್ಯಾರ್ಥಿಯಾಗಿದ್ದರು. == ರಾಜಕೀಯ ವೃತ್ತಿಜೀವನ == ಕಮರ್ ಉಲ್ ಇಸ್ಲಾಂ ಕರ್ನಾಟಕ ರಾಜ್ಯದಿಂದ ೬ ಬಾರಿ ಶಾಸಕರಾಗಿದ್ದರು. ಅವರು ೧೯೭೮ ರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಲ್ಎಲ್) ಅವರ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೧೯೭೮-೮೩, ೧೯೮೯-೧೯೯೪, ೧೯೯೪-೧೯೯೬, ೧೯೯೯-೨೦೦೪ರ ಅವಧಿಯಲ್ಲಿ ಕರ್ನಾಟಕ ಶಾಸಕಾಂಗ ಸಭೆಗೆ ಆಯ್ಕೆಯಾದರು. ಇವರು ೧೯೯೬-೧೯೯೮ರ ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದರು ಮತ್ತು ಮುಖ್ಯಮಂತ್ರಿ ಎಸ್.ಎಂ ನೇತೃತ್ವದ ಆಡಳಿತದಲ್ಲಿ ವಸತಿ ಮತ್ತು ಕಾರ್ಮಿಕ ಸಚಿವರಾಗಿದ್ದರು. ಮೇ ೨೦೧೩ ರಿಂದ ಜೂನ್ ೨೦೧೬ ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ನೇತೃತ್ವದಲ್ಲಿ ಪೌರಾಡಳಿತ, ಸಾರ್ವಜನಿಕ ಉದ್ದಿಮೆಗಳು, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ವಕ್ಫ್ ಸಚಿವ ಸಂಪುಟದ ಸಚಿವರಾಗಿಯೂ ಸೇವೆ ಸಲ್ಲಿಸಿದರು. == ವೈಯಕ್ತಿಕ ಜೀವನ == ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಡಾ ಕಮರ್ ಉಲ್ ಇಸ್ಲಾಂ ಉರ್ದು ಬಗ್ಗೆ ಅಪಾರ ಒಲವು ಹೊಂದಿದ್ದರು ಮತ್ತು ಅವರು ಕೆಲವೊಮ್ಮೆ ಶಾಯರಿಯನ್ನು ಸಹ ಬರೆಯುತ್ತಿದ್ದರು. ಇವರ ಜೀವನದುದ್ದಕ್ಕೂ ವಿವಿಧ ಉರ್ದು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ ವಹಿಸಿದ್ದಾರೆ. == ಪಡೆದ ಸ್ಥಾನಗಳು == == ಉಲ್ಲೇಖಗಳು ==